ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನುಷ್ಯ ತನ್ನ ಅನುಕೂಲವಾಗುವಂತೆ ವಾಹನ ಖರೀದಿ ಮತ್ತು ಅದರ ಬಳಕೆ ಹೆಚ್ಚು ಹೆಚ್ಚು ಮಾಡುತ್ತಲೇ ಇದ್ದಾನೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ಅಪಘಾತ ಗಳು ಕೂಡಾ ಹೆಚ್ಚಾಗತೊಡಗಿವೆ.
ನಾವೂ ನಮ್ಮ ವಾಹನಗಳನ್ನು ಬೇರೆಯವರ ಕೈಗೆ ನೀಡುವ ಮುನ್ನ ಸ್ವಲ್ಪ ವು ಯೋಚಿಸದೆ ನೀಡುತ್ತೇವೆ. ಆ ಸಮಯದಲ್ಲಿ ಏನಾದರೂ ಅಪಘಾತ ದಂತಹ ಸಮಸ್ಯೆ ಉಂಟಾದಲ್ಲಿ ಅದರ ಪರಿಣಾಮ ದ ಬಗ್ಗೆ ಯೋಚಿಸುವದೇ ಇಲ್ಲ.
ಸ್ವಂತ ಅನುಭವ ಹಂಚಿಕೊಳ್ಳುತ್ತಿದ್ದೇನೆ. ಕೇಳಿ
ನಾನು ತುಂಬಾ ದಿನದಿಂದ ಒಂದು ಬೈಕ್ ಕರಿದಿಸಲೆಂದು ದುಡ್ಡು ಕುಡಿಹಾಕುತ್ತಿದೆ, ಅದು ಸಾದ್ಯವಾಗುತ್ತಿರಲಿಲ್ಲ ಏನಾದರೂ ಮನೆಯಲ್ಲಿ ನಡೆಯುತ್ತಿತ್ತು ದುಡ್ಡು ಖರ್ಚು ಆಗಿ ಹೋಗುತ್ತಿತ್ತು. ನನ್ನ ಪ್ರೇಯಸಿ ಊರಿಗೆ ಬರಲು ಪದೇ ಪದೇ ಹೇಳುತ್ತಿದ್ದಳು, ನಾನು ಅವಳನ್ನು ಬೈಕ್ ನಲ್ಲಿ ತಿರುಗಾಡಿಸಲಾದರು ಬೈಕ್ ಖರೀದಿ ಮಾಡಬೇಕು ಎಂದು ಊರಿಗೆ ಬರದಾದೆ.
ಒಂದಿನ ಫೋನ್ ಮಾಡಿದ ಅವಳು ನಾನು ನಿಮಗೆ ಬೈಕ್ ಖರೀದಿಸಲು ದುಡ್ಡು ವ್ಯವಸ್ಥೆ ಮಾಡಿದ್ದಾಗಿ ಹೇಳಿದಳು, ನನಗೆ ತುಂಬಾ ಖುಷಿ ಎನಿಸಿತು. ನಾನು ನನ್ನ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿ ರಜೆಗೆ ಹೊರಟೆ ಬಿಟ್ಟೆ. ರಜೆಗೆ ಹೋಗಿ ನನ್ನ ಕನಸಿನ ಬೈಕ್ ಖರೀದಿ ಮಾಡಿದೆ ದುಡ್ಡೇಲ್ಲವೂ ಅವಳೇ ನೀಡಿದಳು. ಆರ್ ಟಿ ಓ ನಲ್ಲಿ ಬೈಕ್ ಪಾಸಿಂಗ್ ಮಾಡಿಕೊಂಡು ಅವಳೊಂದಿಗೆ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ಮತ್ತು ಪಾರ್ಕಗಳನ್ನು ಸುತ್ತಿದೆ.
ಅಷ್ಟರಲ್ಲೇ ರಜೆ ಮುಗಿಯಿತು ನಾನು ಹೊರಟು ಬಂದೆ. ಬೈಕ್ ಮನೆಯಲ್ಲಿ ನಿಲ್ಲಿಸಿದ್ದೆ ಒಂದಿನಾ ಬೈಕ್ ಸರ್ವಿಸಿಂಗ್ ಗಾಗಿ ಬೈಕ್ ಸೊರೋಮ್ ನಿಂದ ಕರೆ ಬಂತು. ಅದೇ ಸಂದರ್ಭದಲ್ಲಿ ನನ್ನ ಸ್ನೇಹಿತ ರಜೆಗೆ ಹೋಗಿದ್ದ ಅವನಿಗೆ ಕರೆ ಮಾಡಿ ಹೇಳಿದೆ, ಬೈಕ್ ಸರ್ವಿಸಿಂಗ್ ಮಾಡಿಕೊಂಡು ಬರಲು. ಅದಕ್ಕವನು ಸರಿ ಎಂದು ಮರುದಿನ ಮನೆಯಿಂದ ಬೈಕ್ ಸರ್ವಿಸಿಂಗ್ ಗೆ ತೆಗೆದುಕೊಂಡು ಹೋದ ಆದರೆ ಅವನು ಆ ದಿನ ಬೈಕ್ ಸರ್ವಿಸಿಂಗ್ ಮಾಡಿಸದೆ ತಮ್ಮ ಅಮ್ಮನೊಂದಿಗೆ ಶಾಪಿಂಗ್ ಮಾಡಿಕೊಂಡು ಬಂದಿದ್ದ ಮತ್ತೆ ಮರುದಿನ ನನಗೆ ಹೇಳದೆ ಬೈಕ್ ತೆಗೆದುಕೊಂಡು ಹೋಗಿ ಸರ್ವಿಸಿಂಗ್ ಮಾಡಿಕೊಂಡು ತನ್ನ ಸ್ನೇಹಿತರಿಗೆ ಭೇಟಿಯಾಗಿ ಬರುವಾಗ ಓವರ್ ಸ್ಪಿಡ್ ನಿಂದಾಗಿ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು ದೂರ ಹೋಗಿ ಬಿದ್ದಿದ್ದ.
ಸ್ನೇಹಿತನಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಒಂದು ವಾರಗಳ ಕಾಲ ಆತ ಕೋಮಾದಲ್ಲೇ ಇದ್ದ ಇತ್ತ ಅವನ ತಂದೆ ತಾಯಿ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ನನಗೆ ಇಲ್ಲಿ ದಿಗ್ಭ್ರಮೆ ಹಿಡಿದಿತ್ತು. ಅವನ ಆಸ್ಪತ್ರೆಯ ಖರ್ಚು ವೆಚ್ಚ ನಾನೇ ನೋಡಿಕೊಳ್ಳುತ್ತಿದ್ದೆ. ಪೊಲೀಸ್ ಕಿರಿಕಿರಿ ಬೇರೆ.
ಒಂದು ವಾರಗಳ ನಂತರ ನನ್ನ ಸ್ನೇಹಿತ ಕೋಮಾದಿಂದ ಹೊರಗೆ ಬಂದ. ಬೈಕ್ ನನಗೆ ಹೇಳದೆ ವಯ್ಯ್ದದ್ದರ ಬಗ್ಗೆ ಹೇಳಿ ತನ್ನದೇ ತಪ್ಪು ಇರುವ ಬಗ್ಗೆ ತನ್ನ ತಂದೆ ತಾಯಿಯರ ಬಳಿ ಹೇಳಿ, ಪೊಲೀಸ್ ಠಾಣೆಯಲ್ಲಿ ದೂರು ಮರಳಿ ಪಡೆಯಲು ಹೇಳಿದ.
ಆಗ ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಒಂದು ವೇಳೆ ಅವನೇನಾದರು ಅಪಘಾತದಿಂದ ಮೃತ ಪಟ್ಟಿದ್ದರೆ? ಕೊನೆಗೆ ಬೈಕ್ ಮಾರಿ ಆಸ್ಪತ್ರೆಗೆ ದುಡ್ಡು ಕಟ್ಟಿದೆ. ಸಾಲದ್ದಕ್ಕೆ ಸಾಲವು ಮಾಡಿದೆ. ಬೈಕು ಹೋಯ್ತು, ದುಡ್ಡು ಹೋಯ್ತು, ಸಾಲವು ಆಯ್ತು.
ಈ ಪ್ರಕರಣ ನೋಡಿ.
ರಸ್ತೆ ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಯುತ ಪರಿಹಾರ ನೀಡದ ವಾಹನ ಮಾಲೀಕನ ಮನೆ ಹಾಗೂ ಆಸ್ತಿ ಪಾಸ್ತಿಯನ್ನು ಹರಾಜು ಹಾಕಿ ಪರಿಹಾರವನ್ನು ನೀಡುವಂತೆ 9ನೇ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ. ಬೆಳಗಾವಿ ಜಿಲ್ಲೆಯ ಯಮನಾಪುರದ ನಾಗಯ್ಯ ಎಂಬ ವ್ಯಕ್ತಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ನಗರದ ಮಾರ್ಖಂಡೆಯ ಬಡಾವಣೆಯ ನಿವಾಸಿ ಸಚಿನ್ ಸುರೇಶ್ ಸಾಖರೆ ಎನ್ನುವವರ ಮಾಲೀಕತ್ವದ ಬೈಕ್ ಬೇರೆಯವರು ಚಲಾಯಿಸುತ್ತಿದ್ದಾಗ ಡಿಕ್ಕಿಯಾಗಿ ನಾಗಯ್ಯ ಎಂಬುವವರು ಮೃತಪಟ್ಟಿದ್ದರು.
ಈ ಬಗ್ಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ವಾಹನ ಮಾಲೀಕನ ವಿರುದ್ಧ ಮೃತನ ಕುಟುಂಬದವರು ದಾವೆ ಹೂಡಿದ್ದರು, ಅದರ ಉಪರೋಕ್ತವಾಗಿ ನ್ಯಾಯಾಲಯವು ನ್ಯಾಯಾಂಗ ತನಿಖೆ ನಡೆಸಿ 2019ರಲ್ಲಿ ವಾಹನ ಮಾಲೀಕ ಮೃತ ವ್ಯಕ್ತಿಯ ಕುಟುಂಬಕ್ಕೆ 12,64,600 ನೀಡಲು ಆದೇಶ ಮಾಡಿತ್ತು. ಆದರೆ ಈ ವರೆಗೂ ಹಣ ಸಂದಾಯ ಮಾಡದ ವಾಹನ ಮಾಲೀಕನ ವಿರುದ್ಧ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆಗಸ್ಟ್ 3ನೇ ತಾರಿಕಿನಲ್ಲಿ ಮೃತ ವ್ಯಕ್ತಿಯ ಕುಟುಂಬದವರಿಗೆ 16 ಲಕ್ಷ ನೀಡುವದಾಗಿ ಆದೇಶ ಮಾಡಿ, ವಾಹನ ಮಾಲೀಕ ಸಚಿನ್ ಸುರೇಶ್ ಸಾಖರೆ ಯವರಿಗೆ ಸಂಬಂಧಿಸಿದ ಮನೆ ಸಹಿತ ಎಲ್ಲಾ ಆಸ್ತಿಯನ್ನು ದಿನಾಂಕ 18 ಆಗಸ್ಟ್ ತಿಂಗಳಲ್ಲಿ ಹರಾಜು ಹಾಕಲು ಅದ್ದೇಶಿಸಿದೆ ಎಂದು ಮೃತ ಕುಟುಂಬದ ವ್ಯಕ್ತಿಯ ಪರ ವಾದಿಸಿದ ವಕೀಲ ದಿನಕರ್ ಶೆಟ್ಟಿ ತಿಳಿಸಿದ್ದಾರೆ.
Tv2ಕನ್ನಡ ಯೌಟ್ಯೂಬ್ ಚಾನೆಲ್ ಲಿಂಕ್
ಕಾಮೆಂಟ್‌ಗಳು