ತಾಲಿಬಾನ್ ಎಷ್ಟೊಂದು ಕ್ರೌರ್ಯ ಮೆರೆಯುತ್ತಿದೆ ಗೊತ್ತಾ?


 ಅಪಘಾನಿಸ್ತಾನದ ಅಧ್ಯಕ್ಷ ಮಹಮ್ಮದ್ ಅಶ್ರಫ್ ಘನಿ ಪ್ರಣಾಭಿಕ್ಷೆಗಾಗಿ ಹೆದರಿ ಓಡಿ ಹೋಗಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಒಂದು ದೇಶದ ಪ್ರಧಾನಿ ಯಾದವನು ಓಡಿ ಹೋಗಿದ್ದನೆಂದರೆ ಅಲ್ಲಿನ ಪರಿಸ್ಥಿತಿ ಊಹಿಸಿಕೊಳ್ಳುವದು ಸಹ ಕಷ್ಟದ ಕೆಲಸವಾಗಿದೆ.

ಅಪಘಾನಿಸ್ತಾನವನ್ನು ಸಂಪೂರ್ಣ ಹತೋಟಿಗೆ ತಗೆದುಕೊಂಡಿರುವ ತಾಲಿಬಾನ್ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಕ್ರೌರ್ಯ ಮೆರೆಯುತ್ತಿದೆ. 



ಅಪಘಾನಿಸ್ತಾನದಲ್ಲಿ ಯಾರು ಕೂಡಾ ಸುರಕ್ಷಿತವಾಗಿ ಇಲ್ಲ ಅಲ್ಲಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಹಿಂಸೆ, ಹೆಡೆ ಬಡೆ ಸಾವು ನೋವು ಮಾಮೂಲಾಗಿದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಪರಸ್ಥಿತಿ ಹೇಳತಿರದಾಗಿದೆ. ಅವರ ಕಷ್ಟಗಳನ್ನು ಕಲ್ಪಿಸಿಕೊಳ್ಳುವದು ಕಷ್ಟ ಸಾಧ್ಯವಾಗಿದೆ.


ಮೊನ್ನೆಯಷ್ಟೇ ಶರನಾಗತರಾಗಿದ್ದ ಅಪಘಾನಿಸ್ತಾನದ ಅನೇಕ ಸೈನಿಕರನ್ನು ತಾಲಿಬಾನ್ ಕೈ ಕಾಲು ಕಟ್ಟಿ ಸಾಲಾಗಿ ಕುಳ್ಳಿರಿಸಿ ತಲೆಗೆ ಗುಂಡುಹಾಕಿ ಕೊಂದು ವೀಕೃತಿ ಮೆರೆಯುತ್ತಿದೆ. ಸೈನಿಕರನ್ನು ಮತ್ತು ಪತ್ರಕರ್ತರನ್ನು ಕೊಲ್ಲುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ತಮ್ಮ ಮೃಗೀಯ ವರ್ತನೆ ತೋರುತ್ತಿದೆ. ಅಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ಪತ್ರಕರ್ತರ ಸ್ಥಿತಿಯು ಕೂಡಾ ಹೀಗೆ ಇದೆ. 



ಮಹಿಳೆ ಮತ್ತು ಹೆಣ್ಣು ಮಕ್ಕಳನ್ನು ಕಂಡ ಕಂಡಲ್ಲೇ ಅತ್ಯಾಚಾರ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳನ್ನು ನೋಡದ ಆ ಕಾಮಪಿಶಾಚಿಗಳು ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ತಾಲಿಬಾನ್ ವಿರುದ್ಧ ಪ್ರದರ್ಶನಕ್ಕೆ ಮುಂದಾದ ಸ್ಥಳೀಯರನ್ನು ಬಿದಿ ಬೀದಿಯಲ್ಲಿ ಅಟ್ಟಾಡಿಸಿ ಕೊಂದು ಹಾಕಿದೆ. ತಾಲಿಬಾನ್ ಈ ರೀತಿ ಕ್ರೌರ್ಯ ಮತ್ತು ವಿಕೃತಿಯನ್ನು ಮೆರೆಯುವದಕ್ಕೆ ನೇರ ಮತ್ತು ಪ್ರಮುಖ ಕಾರಣ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಎನ್ನುತ್ತಿದ್ದಾರೆ ಅಪಘಾನಿಸ್ತಾನದ ಜನತೆ


ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ತನ್ನ ಸೇನೆಯನ್ನು ಹಿಂಪಡೆಯದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮತ್ತು ಹೆದರು ಪುಕ್ಲ್ ಅಪಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಓಡಿ ಹೋಗಬಾರದಿತ್ತು ಎನ್ನುತ್ತಿದ್ದಾರೆ. ಇಲ್ಲಿ ಅಪಘಾನಿಸ್ತಾನ ಮತ್ತು ಅಮೆರಿಕಾದಲ್ಲಿ ಸಮರ್ಥ ನಾಯಕರ ಕೊರತೆ ಕಂಡು ಬರುತ್ತಿದೆ.  G7 ಶೃಂಗ ಸಭೆಯಲ್ಲಿ ಅಪಘಾನಿಸ್ತಾನದ ಮುಂದಿನ ಕ್ರಮಗಳ ಬಗ್ಗೆ  ಪ್ರಸ್ತಾಪ ನಡೆದ ಬಳಿಕ ತಾಲಿಬಾನ್ ಪರಿಸ್ಥಿತಿ ಏನಾಗುತ್ತದೆ ಎಂದೂ ಕಾದು ನೋಡಬೇಕಿದೆ.


#Tv2kannada

#tv2ಕನ್ನಡ

#mahitivedike

#ಮಾಹಿತಿ_ವೇದಿಕೆ

Tv2ಕನ್ನಡ ಯೌಟ್ಯೂಬ್ ಚಾನೆಲ್ ಲಿಂಕ್



ಕಾಮೆಂಟ್‌ಗಳು