ಶ್ರೀರಾಮನನ್ನು ಕಂಡು ಹೆದರಿ ಹೌಹಾರಿದ್ದ ಲಂಕೆಯನ್ನರು, ರಾಮನನ್ನೇ ಪೂಜಿಸುತ್ತಿರುವರು.

 


ಜಗನ್ಮಾತೆ ಸೀತೆಯನ್ನು ಅಪಹರಿಸಿಕೊಂಡು ಹೊತ್ತೊಯ್ದ ಆ ದುಷ್ಟ ರಾವಣನನ್ನು ಸಂಹರಿಸುವದಕ್ಕಾಗಿ ಶ್ರೀರಾಮ ಹೊರಟು ನಿಂತಿದ್ದ, ಭರತ ಭೂಮಿಯಿಂದ ಲಂಕೆಗೆ ಹೋಗುವದು ಅಸಾದ್ಯದ ಮಾತಾಗಿತ್ತು, ಪವನಪುತ್ರ ಹನುಮಂತನಿಗೆ ತನ್ನಲ್ಲಿರುವ ದಿವ್ಯ ಶಕ್ತಿಗಳು ಜ್ಞಾಪಕವಾಗಿ ತನ್ನ ಶಕ್ತಿಯನ್ನು ಬಳಸಿಕೊಂಡು ಲಂಕೆಗೆ ಹಾರಿದ, ಶ್ರೀರಾಮ ಲಂಕೆಗೆ ಬರುವ ಮುಂಚೆಯೇ ಲಂಕೆಯನ್ನು ಸುಟ್ಟು ಹಾಕಿದ.


 ಸೇತುವೆಯನ್ನು ಕಟ್ಟಿ ಶ್ರೀ ರಾಮನ ಸೈನ್ಯ ಲಂಕೆಗೆ ಪ್ರವೇಶಿಸಿತು ಅಲ್ಲಿ ಘನಘೋರ ಯುದ್ಧಗಳೇ ನಡೆದು  ರಾವಣನ ಸಹೋದರ ಸಹೋದರಿ ಮಕ್ಕಳು ಹೀಗೆ ಇಬ್ಬಬ್ಬರಾಗಿ ಸತ್ತು ಹೋದರು, ಕೊನೆಗೆ ರಾವಣ ತಾನು ಮಾಡಿದ ತಪ್ಪನ್ನು ತಿದ್ದುಕೊಳ್ಳದೆ, ಎಂತಹ ಪಂಡಿತನಾದರು ಶಕ್ತಿ ಶಾಲಿಯಾದರು ಕೂಡಾ ಕೊನೆಗೆ ಶ್ರೀರಾಮನ ಬಿಲ್ಲುಬಾಣಗಳ ಮಳೆಗೆ ರಾವಣ ಸತ್ತು ಹೋದ.



ರಾವಣನೇನು ಸತ್ತು ಹೋದ, ಶ್ರೀಲಂಕೆಯ ಪ್ರಜೆಗಳಲ್ಲಿ ಭಯ, ಹೆದರಿಕೆ ಮೂಡಿತು, ಜನರು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೆದರಿ ಹೌಹಾರಿ ಒಡಲಾರಂಭಿಸಿದರು. ಅದಕ್ಕೆ ಒಂದು ಪ್ರಮುಖ ಕಾರಣವು ಇತ್ತು. ರಾವಣ ಪಾವನ ಪತಿವ್ರತೆ, ಜಗನ್ಮಾತೆ ಸೀತೆಯನ್ನು ಅಪಹರಿಸಿ ಹೊತ್ತು ಬಂದಿದ್ದ, ಶ್ರೀರಾಮ ತನ್ನ ಹೆಂಡತಿಯನ್ನು ಹೊತ್ತೊಯ್ದವನ ಕತ್ತು ಸೀಳಿದ್ದ, ಇನ್ನೇನು, ನಮ್ಮ ಪಾಡೇನು, ನಮ್ಮನ್ನು ಕೊಲ್ಲಬಹುದು, ಅತ್ಯಾಚಾರ ಮಾಡಬಹುದು, ನಮ್ಮ ಶೀಲ ರಕ್ಷಣೆ ಹೇಗೆ ಎಂದು ಚಿಂತಿಸಿದ ಲಂಕೆಯ ಜನತೆ ರಾಮನನ್ನು ಕಂಡು ಹೆದರಿ ಹೌಹಾರಿದ್ದರು.



ಶ್ರೀರಾಮ ಲಂಕೆಯ ಜನತೆಗೆ ಹೇಳುತ್ತಾನೆ, ಪ್ರೀತಿಯ ಲಂಕೆಯ ಪ್ರಜೆಗಳೇ ನೀವು ಹೆದರುವ ಭಯಬಿಳುವ ಅವಶ್ಯಕತೆ ಇಲ್ಲ. ನಾನು ನನ್ನ ಸೇನೆ ನಿಮಗೆ ಏನು ತೊಂದರೆ ಕೊಡುವದಿಲ್ಲ ಈ ರಾಜ್ಯವು ಕೂಡಾ ನನಗೆ ಬೇಕಿಲ್ಲ, ನಿಮ್ಮ ಪ್ರೀತಿಯೇ ನನಗೆ ಸಾಕೆಂದು ಗೆದ್ದ ರಾಜ್ಯವನ್ನು ಬಿಟ್ಟು ಹೊರಟು ನಿಂತ.


ರಾವಣನ ತಮ್ಮನಾದ ವಿಭೀಷಣ ಶ್ರೀರಾಮನಿಗೆ ವಿನಂತಿಸಿದ ಹೇ ಜಗದುದ್ದಾರಕ ಶ್ರೀರಾಮ ನೀನು ಈ ರಾಜ್ಯದ ಒಡೆಯ ಇಂದಿನಿಂದ ಈ ರಾಜ್ಯಕ್ಕೆ ರಾಜನಾಗು ಪ್ರಜೆಗಳ ಹಿತ ಕಾಪಾಡು ಎಂದು ಬೇಡಿಕೊಂಡ, ಶ್ರೀ ರಾಮ ವಿಭೀಷಣನಿಗೆ ಹೇಳಿದ ಹೇ ವಿಭೀಷಣ ನನಗೆ ಈ ರಾಜ್ಯ ಬೇಕಿಲ್ಲ, ನೀನು ರಾವಣನ ಸಹೋದರ, ರಕ್ತ ಹಂಚಿಕೊಂಡು ಹುಟ್ಟಿರುವ ಕಾರಣ ನೀನು ಮಾತ್ರ ಈ ರಾಜ್ಯಕ್ಕೆ ವಾರಸುದಾರ, ನೀನೇ ಈ ರಾಜ್ಯದ ಪ್ರಜೆಗಳ ಹಿತ ಕಾಯುವ ದೊರೆಯಾಗು ಎಂದು ಲಂಕೆಗೆ ವಿಭೀಷಣನನ್ನು ರಾಜನನ್ನಾಗಿ ಮಾಡಿ ಉಟ್ಟ ಬಟ್ಟೆಯಲ್ಲೇ ತನ್ನ ಅಯೋದ್ದೆಗೆ ಹಿಂದಿರುಗಿದ.


ಶ್ರೀರಾಮನಿಗೆ ಹೆದರಿದ ಲಂಕೆಯ ಜನತೆ ರಾಮನ ಔಧಾರ್ಯ, ತ್ಯಾಗ ವನ್ನು ಕಂಡು ಮುಖವಿಸ್ಮಿತರಾದರು ಶ್ರೀರಾಮನನ್ನ ಹರಸಿ ಕೊಂಡಾಡಿದರು, ಶ್ರೀರಾಮನೆ ಆ ದೇವರೆಂದು ಪೂಜಿಸಿದರು. ಆಮೇಲೆ ಅರಿತರು ಈ ಸೃಷ್ಟಿಯ ಸೃಷ್ಟಿಗೆ ಕಾರಣನೆ ಶ್ರೀರಾಮ ಎಂಬುದು ಗೊತ್ತಾದಮೇಲೆ ಇಂದಿಗೂ ಶ್ರೀರಾಮನನ್ನೇ ಪೂಜಿಸುತ್ತಿರುವರು.


ಜೈ ಶ್ರೀ ರಾಮ

ಜೈ ಹನುಮಂತ

Tv2 kannada ಯೌಟ್ಯೂಬ್ ಚಾನೆಲ್

#Tv2kannada     #tv2ಕನ್ನಡ

#Mahitivedike    #ಮಾಹಿತಿವೇದಿಕೆ




ಕಾಮೆಂಟ್‌ಗಳು