e-rupi ಯ ಪ್ರಯೋಜನ ಗಳೇನು ಗೊತ್ತಾ? ತಿಳಿದುಕೊಳ್ಳಿ.


 ಜಗತ್ತಿನ ಶ್ರೇಷ್ಠ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿಯವರು ಇ-ರೂಪಿ ಯನ್ನು ಇತ್ತೀಚೆಗೆ ಲಾಂಚ್ ಮಾಡಿದ್ದಾರೆ. ಇ-ರೂಪಿ  ಭ್ರಷ್ಟಾಚಾರ ನಿರ್ಮೂಲನೆ ಮಾಡುವದರಲ್ಲಿ ಬಹಳ ಮಹತ್ವದ ಪಾತ್ರ ವಹಿಸುವದರಲ್ಲಿ ಎರಡು ಮಾತಿಲ್ಲ.


ಇದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಪ್ ಇಂಡಿಯಾದ ಇನ್ನೊಂದು ಮುಂದು ವರೆದ ಆಡ್ವಾನ್ಸ್ಡ ಟೆಕ್ನೋಲೊಜಿ ಆಗಿದೆ. ಇದು ಹಣದ ದುರುಪಯೋಗ ತಡೆಯುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.



ಬನ್ನಿ ಇ-ರೂಪಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಕೆಳಗಿನ ಉದಾಹರಣೆ ಮೂಲಕ ತಿಳಿದುಕೊಳ್ಳಬಹುದು


ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಖಾಸಗಿ ಸಂಘ ಸಂಸ್ಥೆಗಳು ಯಾವುದೇ ಇರಲಿ 

ಸದ್ಯ ರೈತರಿಗೆ ವಾರ್ಷಿಕವಾಗಿ ನರೇಂದ್ರ ಮೋದಿ ಸರ್ಕಾರ 6000 ರೂ ಗಳನ್ನು ರೈತರಿಗೆ ಪ್ರೋತ್ಸಾಹ ಧನವಾಗಿ ಬೀಜ ಮತ್ತು ಗೊಬ್ಬರವನ್ನು ಕರಿದಿಸಲೆಂದು ನೀಡುತ್ತೋರುವದು ತಮಗೆ ಗೊತ್ತೇ ಇದೆ ಅಲ್ವಾ? ಅದೇ ರೀತಿ ಯಾವುದೇ ಉದ್ದೇಶದಿಂದ ರೈತನಿಗೆ ಆಗಲಿ ಅಥವಾ ಯಾವುದೇ ಪಾಲಾನುಭವಿಗೆ ತಲುಪಿದ ಹಣ ಕೇವಲ ಅವನ ಉದ್ದೇಶ ಈಡೇರಿಸಲು ಬಳಕೆಯಾಗಲಿ ಎಂದು ಈ ಇ-ರೂಪಿ ಜಾರಿಗೆ ಬಂದಿದೆ.



ಉದಾಹರಣೆಗೆ 


ರೈತರಿಗೆ ಬೀಜ ಮತ್ತು ಗೊಬ್ಬರ  ಕರಿದಿಸಲೆಂದು ಸರ್ಕಾರ ಹತ್ತು ಸಾವಿರ ರೂಪಾಯಿ ದುಡ್ಡನ್ನು ಕೊಡುತ್ತದೆ ಅಂದುಕೊಳ್ಳಿ. ಅದು ನೇರವಾಗಿ ಅವನ ಅಕೌಂಟ್ ಗೆ ದುಡ್ಡನ್ನು ಜಮಾ ಮಾಡದೆ ರೈತನ ಮೊಬೈಲ್ ಗೆ ಹತ್ತು ಸಾವಿರ ರೂಪಾಯಿಯ ಒಂದು ಕಿವ್ಆರ್ ಕೋಡ್ ಅಥವಾ ಟೆಕ್ಸ್ಟ್ ಕೋಡ್  ಕಳಿಸುತ್ತದ್ದೆ.

ಆ ಕೋಡ್ ನ್ನು ಗೊಬ್ಬರದ ಅಂಗಡಿಗೆ ಹೋಗಿ ಬೀಜ ಮತ್ತು ಗೊಬ್ಬರ ಖರೀದಿಸಿದರೆ  ಹತ್ತು ಸಾವಿರ ರೂಪಾಯಿ ಅಲ್ಲಿ ಸಂದಾಯವಾಗುತ್ತದೆ.


ಒಂದು ವೇಳೆ ರೈತ ಆ ಸರ್ಕಾರದ ದುಡ್ಡನ್ನು ದುರುಪಯೋಗ ಪಡಿಸಿಕೊಳ್ಳಲು ಬೀಜ ಮತ್ತು ಗೊಬ್ಬರದ ಬದಲಾಗಿ ಸಾರಾಯಿ ಅಥವಾ ಇನ್ನಿತರ ವಸ್ತುಗಳನ್ನು ಖರೀದಿಸಿ ಆ ಕಿವ್ಆರ್ ಕೋಡ್ ಅಥವಾ ಟೆಕ್ಸ್ಟ್ ಕೋಡ್ ಕೊಟ್ಟರೆ ಅದು ಅಲ್ಲಿ ಕೆಲಸ ಮಾಡುವದಿಲ್ಲ. ಅದು ಕೇವಲ ಬೀಜ ಮತ್ತು ಗೊಬ್ಬರದ ಅಂಗಡಿಯಲ್ಲಿ ಮಾತ್ರ ಕೆಲಸ ಮಾಡುತ್ತದೆ.


ಇನ್ನೊಂದು ಉದಾಹರಣೆ

ಸರ್ಕಾರವು ಹಿರಿಯ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆಗೆ ಹಣವನ್ನು ನೀಡುತ್ತದೆ ಅಂದುಕೊಳ್ಳಿ ಆಗ ಯಾವೆಲ್ಲಾ ಹಿರಿಯ ನಾಗರಿಕರಿಗೆ ದುಡ್ಡು ಬಂದಿರುತ್ತದೆಯೋ ಅವರು ಆಸ್ಪತ್ರೆಗಳಲ್ಲಿ ಮತ್ತು ಔಷಧಿ ಕೇಂದ್ರಗಳಲ್ಲಿ ಮಾತ್ರ ಈ ಇ-ರೂಪಿ ಬಳಕೆಯಾಗುತ್ತದೆ. 


ಒಂದು ವೇಳೆ ಆ ಹಿರಿಯ ನಾಗರಿಕರು ಆಸ್ಪತ್ರೆ ಮತ್ತು ಔಷಧಿ ಕೇಂದ್ರದ ಬದಲಾಗಿ ಮೊಮ್ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಅಥವಾ ಹೋಟೆಲ್ ನಲ್ಲಿ ಅಥವಾ ಬಟ್ಟೆ ಅಂಗಡಿಯಲ್ಲಿ ಹೀಗೆ ಬೇರೆ ಕಡೆಯಲ್ಲಿ ಆ ಕಿವ್ಆರ್ ಕೋಡ್ ಅಥವಾ ಟೆಕ್ಸ್ಟ್ ಕೋಡ್ ಕೊಟ್ಟರೆ ಅದು ಕೆಲಸ ಮಾಡುವದಿಲ್ಲ. ಹೀಗಾಗಿಯೇ ಈ ಇ-ರೂಪಿ ಹಣದ ದುರುಪಯೋಗ ಆಗಲು ಬಿಡುವುದಿಲ್ಲ.


ಕೆಲ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಬಂದ ಹಣವನ್ನು ಅವರ ಮಕ್ಕಳು ಅಥವಾ ಅವರ ಅವಲಂಬಿತರು ಅಥವಾ ವಾರಸುದಾರರು  ಕಸಿದುಕೊಂಡು ತಮ್ಮ ಈಡೇರಿಕೆಗೆ ಬಳಸಿಕೊಳ್ಳಲು ಸಾದ್ಯವಿಲ್ಲ.



ಇ- ರೂಪಿ ಹೇಗೆ ಕೆಲಸ ಮಾಡುತ್ತದೆ?

ಹೌದು ಈ ಪ್ರಶ್ನೆ ಬಂದೆ ಬರುತ್ತದೆ. ಇಷ್ಟೊಂದು ಸುರಕ್ಷಿತ ಇರುವ ಈ ಇ ರೂಪಿ ಹೇಗೆ ಕೆಲಸ ಮಾಡುತ್ತದೆ ಎಂದರೆ ಸರ್ಕಾರದ ಯಾವುದೇ ಕಾರಣದಿಂದ ಫಲಾನುಭವಿಗಳಿಗೆ ನೀಡುವ ಹಣವನ್ನು ಅವರ ಖಾತೆಗೆ ಜಮಾ ಮಾಡದೆ ಕಿವ್ಆರ್ ಕೋಡ್ ಅಥವಾ ಟೆಕ್ಸ್ಟ್ ಕೋಡ್ ಮೂಲಕ ನೀಡುತ್ತದೆ. ಯಾವ ಉದ್ದೇಶದಿಂದ ನೀಡಿರುತ್ತದೆ ಅದೇ ಉದ್ದೇಶದ ಅಂಗಡಿ, ಕಚೇರಿ ಸಂಘ ಸಂಸ್ಥೆಗಳಗೆ ಆ ಕಿವ್ಆರ್ ಕೋಡ್ ಅಥವಾ ಟೆಕ್ಸ್ಟ್ ಕೋಡ್ ನ ಪ್ರತಿಯನ್ನು ಕೊಟ್ಟಿರುತ್ತದೆ.


ಗ್ರಾಹಕರು ತಮ್ಮಲ್ಲಿರುವ ಕಿವ್ಆರ್ ಕೋಡ್ ಅಥವಾ ಟೆಕ್ಸ್ಟ್ ಕೋಡ್ ಕೊಟ್ಟಾಗ ಅದು ಆ ಅಂಗಡಿಯಲ್ಲಿ ಮ್ಯಾಚ್ ಆಗಬೇಕು, ಮ್ಯಾಚ್ ಆದರೆ ಮಾತ್ರ ಅಂಗಡಿಯವನು ತನ್ನಲ್ಲಿರುವ ಸಾಮಗ್ರಿಗಳನ್ನು ಕೊಡುತ್ತಾನೆ. 


ಇನ್ನೊಂದು ಯಾವುದೇ ಬೇರೆ ದೇಶ ಸರ್ಕಾರ ಅಥವಾ ಕಂಪನಿ, ನಮ್ಮ ದೇಶದ ಸರ್ಕಾರ, ಕಂಪನಿ, ಸಂಘ ಸಂಸ್ಥೆಗಳು ಮತ್ತು ಇನ್ನಿತರದವುಗಳು ತಮ್ಮ ಕೆಲಸಕ್ಕೆಂದು ತಮ್ಮ ರಿಪ್ರಜೆನ್ಟ್ ರನ್ನು ಅಥವಾ ಕಾರ್ಮಿಕರನ್ನ ಕೆಲಸಕ್ಕೆಂದು ಕಳುಹಿಸಿ ಅವರ ಖರ್ಚು ವೆಚ್ಚ ನೀಡುತ್ತದೆ ಅಂತಹ ಸಂದರ್ಭದಲ್ಲಿ ಆ ಕೆಲಸಗಾರರು ಆ ದುಡ್ಡನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಪದ್ದತಿ ಮೊದಲಿನಿಂದಲೂ ಬಂದಿದೆ. 


ಉದಾಹರಣೆಗೆ

ಒಬ್ಬ ಕೆಲಸಗಾರ ಬೆಂಗಳೂರಿಗೆ ಕೆಲಸದ ನಿಮಿಥ್ಯ ಬಂದಿದ್ದಾನೆಂದುಕೊಳ್ಳಿ ಆತ ಇರುವದಕ್ಕೆ ದೊಡ್ಡ ಹೋಟೆಲ್, ತಿರುಗಾಡುವದಕ್ಕೆ ಕಾರು, ಉತ್ತಮ ತಿಂಡಿ ತಿನಿಸುಗಳನ್ನು ಮತ್ತು ಅಲ್ಲಿನ ಅವಶ್ಯಕತೆ ಪೊರೈಕೆಗಾಗಿ ಆತನ ಕಂಪನಿ  ಅವನಿಗೆ ಇಂತಿಷ್ಟು ಅಂತಾ ಹಣ ನೀಡುತ್ತದೆ. ಆದರೆ ಅವನು ಆ ಎಲ್ಲಾ ಹಣವನ್ನು ಪಡೆದುಕೊಂಡು ಸಾಮಾನ್ಯ ಹೋಟೆಲ್, ಆಟೋ ಮಾಡಿಕೊಂಡು ಬೀದಿ ಬದಿಯ ತಿಂಡಿ ತಿಂದು ಹಣ ಉಳಿತಾಯ ಮಾಡುವ ಪ್ರಯತ್ನ ಮಾಡುತ್ತಾನೆ. ಇಲ್ಲಿ ಇ-ರೂಪಿ ಇರುವದರಿಂದ ಇ-ರೂಪಿ ಕೇವಲ ಪೂರ್ವ ನಿಯೋಜಿತ ಸ್ಥಾನದಲ್ಲೇ ಕೆಲಸ ಮಾಡುವದರಿಂದ ಕೆಲಸಗಾರ ಕಂಪನಿಗೆ ಮೋಸ ಮಾಡಲು ಸಾದ್ಯವಾಗುವಾದಿಲ್ಲ.


ಇ-ರೂಪಿ ದುರುಪಯೋಗ ಆಗೋದೇ ಇಲ್ವಾ?

                ಪಲಾನುಭವಿಯ ಅನುಕೂಲಕ್ಕಾಗಿ ಬಂದಿರುವ ಹಣವನ್ನು ಕೇವಲ ಆಯಾ ಉದ್ದೇಕ್ಕಾಗಿ ಬಂದಿರುವದರಿಂದ ಅದೇ ಉದ್ದೇಶದ ಹೆಸರಿನಿಂದ ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ.


ಉದಾಹರಣೆಗೆ

ಒಬ್ಬ ರೈತನಿಗೆ ಬೀಜ ಗೊಬ್ಬರ ಕರಿದಿಸಲೆಂದು ಬಂದಿರುವ ಈ ಹಣವನ್ನು ಬೇರೆಲ್ಲೂ ಬಳಸಲು ಸಾದ್ಯವಿಲ್ಲ ಆದ್ದರಿಂದ ರೈತ ಸಂಬಂಧ ಪಟ್ಟ ಬೀಜ ಗೊಬ್ಬರದ ಅಂಗಡಿಗೆ ಹೋಗಿ ಅಲ್ಲಿ ಬೀಜ ಗೊಬ್ಬರದ ಬದಲಾಗಿ ಸ್ವಲ್ಪ ಅಂಗಡಿ ಮಾಲೀಕನಿಗೆ ಕಮಿಷನ್ ಕೊಟ್ಟು ದುಡ್ಡನ್ನು ಪಡೆಯಬಹುದು. ಹೀಗೆ ಈ ರೀತಿ ದುಡ್ಡು ದುರುಪಯೋಗ ಆಗಬಹುದು. ಆದರೆ ದುಡ್ಡು ನೇರವಾಗಿ ಪಾಲಾನುಭವಿಯ ಖಾತೆಗೆ ಜಮಾ ಮಾಡಿದ್ದಲ್ಲಿ 100ಕ್ಕೆ 90% ರಷ್ಟು ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಇ-ರೂಪಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.


ಸರ್ಕಾರವೂ ಯಾವ ಉದ್ದೇಶಗಳಿಗೆ ಹಣವನ್ನು ನೀಡಿರುತ್ತದೆಯೋ ಆ ಉದ್ದೇಶ ಪೂರೈಕೆ 100 ರಷ್ಟು ಮಾಡಲು ಈ ಕ್ರಮ ಕೈಗೊಳ್ಳಬೇಕು.

ಬೀಜ ಗೊಬ್ಬರ ಅಂಗಡಿ, ಮೆಡಿಕಲ್, ಆಸ್ಪತ್ರೆ ಹೀಗೆ ಪಾಲಾನುಭವಿ ಪವತಿಸಿದ ಹಣದ ಮೊತ್ತದ ಜಿ ಎಸ್ ಟಿ ಇರುವ ಒರಿಜಿನಲ್ ರಸೀದಿಯ ಪ್ರತಿಯನ್ನು   ಪಡೆಯಬೇಕು. ಈ ಸಂದರ್ಭದಲ್ಲಿ ಅಂಗಡಿಯ ಮಾಲೀಕ ಕೇವಲ ತನ್ನಲ್ಲಿರುವ ಸಾಮಾನುಗಳನ್ನು ಮಾತ್ರ ಕೊಡುತ್ತಾನೆ. ಹಣದ ದುರುಪಯೋಗ 99% ರಷ್ಟು ತಡೆಯಬಹುದಾಗಿದೆ.


#e_rupi

#tv2kannada

#ಮಾಹಿತಿ_ವೇದಿಕೆ

Tv2 kannada ಯೌಟ್ಯೂಬ್ ಚಾನೆಲ್



                  

ಕಾಮೆಂಟ್‌ಗಳು