ಸಹೋದರ ಸಹೋದರಿಯರ ಪ್ರೀತಿಯ ಹಬ್ಬ ರಕ್ಷಾ ಬಂಧನ history of raksha bandan

Raksha bandana

 ರಕ್ಷಾ ಬಂಧನ ಹೆಸರೇ ಹೇಳುವಂತೆ ರಕ್ಷಣೆ ಮತ್ತು ಬಂಧನವಾಗಿದೆ  ಹಿಂದೂ ಧರ್ಮದ ಪ್ರತಿಯೊಂದು ಹಬ್ಬ ಹರಿದಿನ ಆಚಾರ ವಿಚಾರ ಸಂಸ್ಕೃತಿ ಮತ್ತು ಪದ್ಧತಿಗಳಲ್ಲಿ ಒಂದಿಲ್ಲೊಂದು ಸೈನಟಿಪಿಕ್ ಲಾಜಿಕ್ ಇದ್ದೆ ಇರುತ್ತದೆ.

                  ಈ ರಕ್ಷಾ ಬಂಧನವೂ ಕೂಡಾ ಅದನ್ನೇ ಹೇಳುತ್ತದೆ ಇಲ್ಲಿ ಸಹೋದರರಾದವರು ತಮ್ಮ ಸಹೋದರಿಯರನ್ನು ರಕ್ಷಿಸುವ ಸಂಕಲ್ಪವನ್ನು ಮಾಡುತ್ತಾರೆ. ಸಹೋದರಿ ನಿನ್ನ ಪಾಲಿನ ಕಷ್ಟ ದಾರಿದ್ರ್ಯ ಎಲ್ಲವನ್ನೂ ನಾನಿನ್ನ ಸಹೋದರನಾಗಿ ಮೆಟ್ಟಿ ನಿಂತು  ನೀ ನಡೆಯೋ  ಹಾದಿಯಲ್ಲಿ ಹೂ ಹಾಸುವೆ, ನಿನ್ನ ಮೇಲೆ ಬೀಳುವ ವಕ್ರ ದೃಷ್ಟಿಯಿಂದ ಮತ್ತು ಕಾಮುಕ ವ್ಯಾಘ್ರರನ್ನು ಸೆದೆಬಡಿಯುವೆ. ನಿನ್ನಯ ಬೆನ್ನೆಲುಬಾಗಿ ಸದಾ ರಕ್ಷಣೆ ಮಾಡುವೆ ಎಂದು ಪ್ರಮಾಣ ಮಾಡುತ್ತಾರೆ.


ಸಹೋದರಿಯರಾದವರು ತಮ್ಮ ಸಹೋದರರ ಆಯುರ್ ಆರೋಗ್ಯ ಯಾವತ್ತಿಗೂ ಚೆನ್ನಾಗಿರಲಿ ತಮ್ಮ ಸಹೋದರರು ಹೋದಲ್ಲೆಲ್ಲಾ ವಿಜಯಶಾಲಿಗಳಾಗಲಿ ಎಂದು ಹರಸುತ್ತಾರೆ. ಈ ಸುಂದರವಾದ ಪರಿಕಲ್ಪನೆಯನ್ನು ರಕ್ಷಾ ಬಂಧನ ಎಂದು ಕರೆಯಲಾಗುತ್ತದೆ.


ಇದು ಸಹೋದರ ಮತ್ತು ಸಹೋದರಿಯರ ಮದ್ಯೆ ಇರುವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಅದರ ಪ್ರತೀಕವಾಗಿ ಪ್ರತಿ ವರ್ಷ ಹಿಸಿ ಹಂಚುವದರ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ವಸ್ತ್ರ ಒಡವೆಗಳನ್ನು ಕೊಡುವ ಪದ್ದತಿ ಇದೆ.


ಈ ಆಧುನಿಕ ಯುಗದಲ್ಲಿ ಸದ್ಯದ  ಪರಿಸ್ಥಿತಿಯನ್ನು  ನೋಡಲಾಗಿ, ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ವ್ಯಭಿಚಾರ, ದುಶ್ಚಟ, ಮದ್ಯ ಪಾನ, ಧೂಮ್ರಪಾನ  ಮತ್ತು ವಿಶೇಷವಾಗಿ ಮತಾಂತರದಂತಹ ಪರಿಸ್ಥಿತಿಯಿಂದ ಸಹೋದರರಾದವರು ತಮ್ಮ ತಮ್ಮ ಸಹೋದರಿಯರನ್ನು ರಕ್ಷಿಸಿಕೊಳ್ಳುವದು ಅನಿವಾರ್ಯವಾಗಿದೆ. 



ಹಿಂದೂ ಪುರಾಣದ ಕಥೆ

ಹಿಂದೂ ಪುರಾಣದ ಪ್ರಕಾರ ಹಲವು ವರ್ಷಗಳ ಹಿಂದೆ, ದೇವರು ಮತ್ತು ರಾಕ್ಷಸರ ನಡುವೆ 12 ವರ್ಷಗಳ ಕಾಲ ನಿರಂತರವಾಗಿ ಯುದ್ಧ ನಡೆಯಿತು. ಯುದ್ಧದ ಕೊನೆಯಲ್ಲಿ ರಾಕ್ಷಸರು ಗೆದ್ದರು. (ಈಗ ತಾಲಿಬಾನ್ ಅಪಘಾನಿಸ್ತಾನವನ್ನು ವಶಪಡಿಸಿಕೊಂಡಂತೆ) ಆ ವೇಳೆ ರಾಕ್ಷಸರು ದೇವರ-ಇಂದ್ರನ ರಾಜನ ಸಿಂಹಾಸನವನ್ನು ವಶಪಡಿಸಿಕೊಂಡಿದ್ದಲ್ಲದೆ ಮೂರು ಪ್ರಪಂಚಗಳನ್ನೂ ಸಹ ವಶಪಡಿಸಿಕೊಂಡರು.


ಇಂದ್ರನು ಯುದ್ಧದಲ್ಲಿ ಸೋತಾಗ, ದೇವತೆಗಳ ಆಧ್ಯಾತ್ಮಿಕ ಶಿಕ್ಷಕ ಬೃಹಸ್ಪತಿಯ ಬಳಿಗೆ ಹೋಗಿ ಸಲಹೆಯನ್ನು ಪಡೆದನು. ಬೃಹಸ್ಪತಿ ಇಂದ್ರನಿಗೆ ರಕ್ಷಣೆ ನೀಡುವ ಕೆಲವು ಮಂತ್ರಗಳನ್ನು ಪಠಿಸುವಂತೆ ಸಲಹೆ ನೀಡಿದರು. ಬೃಹಸ್ಪತಿ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಮಂತ್ರಗಳನ್ನು ಪಠಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.


ಮಂತ್ರಗಳನ್ನು ಪಠಿಸುವ ಈ ಸಮಾರಂಭದಲ್ಲಿ ಒಂದು ಸಣ್ಣ ಪ್ಯಾಕೆಟ್‌ನ ಸುತ್ತಲೂ ದಾರವನ್ನು ಬಿಗಿಯಾಗಿ ಕಟ್ಟಲಾಗಿತ್ತು. ಸಮಾರಂಭದ ನಂತರ, ರಕ್ಷಣೆಯ ಆಶೀರ್ವಾದಗಳನ್ನು ಹೊಂದಿರುವ ಈ ಪ್ಯಾಕೆಟ್ ಅನ್ನು ಇಂದ್ರನ ಪತ್ನಿ ಶಾಚಿ (ಇಂದ್ರಾಣಿ) ಇಂದ್ರನ ಬಲ ಮಣಿಕಟ್ಟಿನ ಮೇಲೆ ಕಟ್ಟುತ್ತಾಳೆ. ಈ ಆಶೀರ್ವಾದಗಳಿಂದಾಗಿ, ಭಗವಾನ್ ಇಂದ್ರನು ರಾಕ್ಷಸರನ್ನು ಸೋಲಿಸಲು ಮತ್ತು ಕಳೆದುಹೋದ ತನ್ನ ರಾಜ್ಯವನ್ನು ಮರಳಿ ಪಡೆಯಲು ಶಕ್ತಿಯನ್ನು ಪಡೆದುಕೊಂಡನು. ನಂತರ ರಾಕ್ಷಶರೋಡನೆ ಹೋರಾಡಿ ವಿಜಯ ಸಾದಿಸಿದನು.


#ರಕ್ಷಾ_ಬಂಧನ

#rakshabandhan

History of raksha bandhan festival



ಕಾಮೆಂಟ್‌ಗಳು