ಹೆಂಡತಿಯ ಗುಪ್ತಾoಗಕ್ಕೆ ಹೊಲಿಗೆ ಹಾಕಿದ ಪತಿ ಮಹಾಶಯ

 

ಭೋಪಾಲ್:-  ಆಗಸ್ಟ್24 ಅಕ್ರಮ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ

ಗುಪ್ತಾoಗಕ್ಕೆ ಹೋಳಿಗೆ ಹಾಕಿದ ಪ್ರಕರಣ ದಾಖಲಾಗಿದೆ ಮಧ್ಯಪ್ರದೇಶ ರಾಜ್ಯದ ಸಿಂಗ್ರೋಲಿ ಜಿಲ್ಲೆಯ ರಾಯ್ಲ್ ಗ್ರಾಮದಲ್ಲಿ 55ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಅಕ್ರಮ ಸಂಬಂಧ ಹೊಂದಿರಬಹುದೆಂದು ಶಂಕಿಸಿ ಅವಳ ಗುಪ್ತಅಂಗಕ್ಕೆ ಹೊಲಿಗೆ ಹಾಕಿದ್ದಾನೆ. ಗಂಡ ಹೆಂಡತಿಯ ನಡುವೆ ಅತಿಯಾದ ವಯಸ್ಸಿನ ಅಂತರ ಇರುವದರಿಂದ ಗಂಡನಾದವನು ಹೆಂಡತಿಯ ಮೇಲೆ ಅಕ್ರಮ ಸಂಬಂಧದ ಬಗ್ಗೆ ಸಂಶಯ ಪಡುತ್ತಿದ್ದ,  ಗಂಡ ಮತ್ತು ಹೆಂಡತಿಯ ನಡುವೆ ಇದೆ ವಿಷಯಕ್ಕೆ ಪದೇ ಪದೇ ಜಗಳ ನಡೆಯುತ್ತಿತ್ತಂತೆ, 

ಹೆಂಡತಿಯು ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಸ್ವಲ್ಪ ಸಲಿಗೆಯಿಂದ ಇರುತ್ತಿದ್ದುದರಿಂದ ಅವಳ ಮೇಲೆ ಶಂಕಿಸಿದ ವ್ಯಕ್ತಿ ಕುಪಿತಗೊಂಡು ಬಲವಂತವಾಗಿ ಹೆಂಡತಿಯ ಗುಪ್ತಾoಗಕ್ಕೆ ಹೋಳಿಗೆ ಹಾಕಿದ್ದಾನೆ. ಹೆಂಡತಿಯು ನೋವಿನಿಂದ ಕಿರುಚುತ್ತಿರುವದನ್ನು ಗಮನಿಸಿದ ನೆರೆಮನೆಯ ಜನರು ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯದ್ಯರು ಸೂಕ್ತ ಚಿಕಿತ್ಸೆ ನೀಡಿ ಹೋಲಿಗೆಗಳನ್ನು ಬಿಚ್ಚಿದ್ದಾರೆ.

                    ಸದ್ಯ ಈ ಪ್ರಕರಣವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆ ವ್ಯಕ್ತಿ ಪರಾರಿಯಾಗಿದ್ದು ಅವನಿಗಾಗಿ ಶೋದ ಕಾರ್ಯ ನಡೆಯುತ್ತಿದೆ. 

ಗಂಡ ಹೆಂಡತಿ ಸಂಬಂಧ ಹಾಲು ಜೇನಿನಂತೆ ಅದರಲ್ಲಿ ಸಂಶಯ ಎಂಬ ಹುಳಿಯನ್ನು ಹಿಂಡಬಾರದು, ಸಂಶಯ ಎಂಬ ಹುಳಿ ಹಿಂದಿದರೆ ಸಂಸಾರ ಎಂಬ ಹಾಲು ಒಡೆದು ಹೋಗುತ್ತದೆ, ಜೀವನದ ಸಾಮರಸ್ಯ ಕಳೆದು ಹೋಗುತ್ತದೆ. ಸಂಶಯ ಎಂಬ ಭೂತ ಹಿಡಿದರೆ ಸುಖ ಶಾಂತಿ ಸಮೃದ್ಧಿ ಕನಸಾಗಿ ಹೋಗುತ್ತದೆ. Tv2 KANNADA




ಕಾಮೆಂಟ್‌ಗಳು