ಈ ಪ್ರಶ್ನೆ ಎಲ್ಲರಿಗೂ ಕಾಡಿಯೇ ಇರುತ್ತದೆ. ಶ್ರೀಮಂತರಾಗಲು ದುಡಿಯಬೇಕು. ಕೆಲವರ ಪ್ರಶ್ನೆ- ನಾವು ಕತ್ತಿತರ ಸಾಕಷ್ಟು ದುಡಿದರು ನಮ್ಮತ್ತಿರ ದುಡ್ಡೇ ಉಳಿಯೋದಿಲ್ಲ ಅಂತಾರೆ.
ದುಡಿಯಬೇಕು ನಿಜ ಆದರೆ ಸಮಯ ಮತ್ತು ಸಂದರ್ಭದ ಪ್ರಕಾರ, ಎಲ್ಲಿ ಮತ್ತು ಎಷ್ಟು ದುಡಿಯಬೇಕು ಮತ್ತು ಹೇಗೆ ದುಡಿಯಬೇಕು ಕೊನೆಗೆ ದುಡಿದ ಹಣವನ್ನು ಹೇಗೆ ಉಳಿಸಬೇಕು ಮತ್ತು ಹೇಗೆ ಗಳಿಸಬೇಕು ಅನ್ನುವದರ ಮೇಲೆ ನಿಮ್ಮ ಶ್ರೀಮಂತಿಕೆ ಮತ್ತು ಬಡತನ ನಿರ್ಧಾರವಾಗುತ್ತದೆ.
ಒಂದೂರಲ್ಲಿ ಇಬ್ಬರು ಯುವಕರಿದ್ದರು ಒಬ್ಬ ರಾಮ ಇನ್ನೊಬ್ಬ ರಹಿಮ್. ಇಬ್ಬರು ಬಾಲ್ಯದಿಂದ ಒಂದೇ ಸ್ಕೂಲ್ ನಲ್ಲಿ ಓದಿದ್ದರು. ಊರಲ್ಲಿ ಕೆಲಸವಿಲ್ಲದ ಕಾರಣ ದುಡಿಯಲು ಇಬ್ಬರೂ ಸೇರಿ ಗುಮ್ಮಟ ನಗರಿ ವಿಜಯಪುರಕ್ಕೆ ಹೋದರು. ನಗರದಲ್ಲಿ ಸಾಕಷ್ಟು ತಿರುಗಾಟ ಮಾಡಿ ಕೊನೆಗೆ ರಾಮಾ ಮತ್ತು ರಹಿಮ್ ಇಬ್ಬರು ಒಂದು ಗ್ಯಾರೇಜ್ ಸೇರಿಕೊಂಡರು.
ಸ್ವಲ್ಪ ದಿನದ ನಂತರ ಇಬ್ಬರು ಸೇರಿ ವಸತಿಗಾಗಿ ಒಂದು ರೂಮ್ ಬಾಡಿಗೆಗೆ ಪಡೆದುಕೊಂಡರು. ತಿಂಗಳಿಗೆ ಇಬ್ಬರಿಗೆ 6000 ವೇತನ ಬರುತ್ತಿತ್ತು ಜೀವನ ಸಾಗಿತು, ರಾಮನಿಗೆ ಈ ಹಣ ಸ್ವಲ್ಪ ಕಡಿಮೆ ಅನಿಸಿತು ಆದರೆ ಕೆಲಸ ಬಿಡುವಂತಿರಲಿಲ್ಲ ಅದಕ್ಕೆ ರಾಮ ಬೆಳಿಗ್ಗೆ ಬೇಗ ಎದ್ದು ಬಸ್ಸು ನಿಲ್ದಾಣದಲ್ಲಿ ಹೋಗಿ ನ್ಯೂಸ್ ಪೇಪರ್ ಹಾಕಲು ಸುರು ಮಾಡಿದ ತಿಂಗಳಿಗೆ1000 ರೂಪಾಯಿ ಸಿಗಲು ಸುರು ಆಯಿತು.
ಸ್ವಲ್ಪ ದಿನಗಳ ನಂತರ ರಾಮ ನ್ಯೂಸ್ ಪೇಪರ್ ಜೊತೆಗೆ ಮನೆಮನೆಗೆ ಹಾಲನ್ನು ಹಾಕಲು ಶುರು ಮಾಡಿದ ಮತ್ತೆ ತಿಂಗಳಿಗೆ 2000 ರಷ್ಟು ಆದಾಯ ಬರ ತೊಡಗಿತು ರಹಿಮ್ ಮಾತ್ರ ಗ್ಯಾರೇಜ್ ಕೆಲಸವನ್ನು ಮಾತ್ರ ಮಾಡುತ್ತಿದ್ದ. ಮತ್ತೆ ಸುಮ್ಮನಿರದ ರಾಮ ಪೇಪರ್ ಮತ್ತು ಹಾಲಿನ ಜೊತೆಗೆ ಬನ್ ಬ್ರೆಡ್ ಮಾರಲು ಶುರು ಮಾಡಿದ ಅವನ ಆದಾಯ ಮತ್ತಷ್ಟು ಹೆಚ್ಚಿತು. ವಿಚಾರ ಮಾಡಿದ ಕೇವಲ ಮನೆಗಳಿಗೆ ಪೇಪರ್, ಹಾಲು, ಬನ್, ಬ್ರೆಡ್ ಕೊಡುವ ಬದಲು ದೊಡ್ಡ ದೊಡ್ಡ ಹೋಟೆಲುಗಳಿಗೆ ಕೊಡಲು ಶುರು ಮಾಡಿದ ರಾಮನ ಆದಾಯ ದ್ವಿಗುಣಗೊಂಡಿತು. ಆಗಲೂ ಕೂಡಾ ರಹಿಮ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಲೇ ಇದ್ದ.
ರಹಿಮ್ ತನಗೆ ಸಮಯ ಸಾಕಷ್ಟು ಸಿಗುತ್ತಿದ್ದಿದ್ದರಿಂದ ಸಿನೆಮಾ ನೋಡಲು ಹೋಗುತ್ತಿದ್ದ, ಸಿಟಿಯ ಜನರ ಸಹವಾಸದಿಂದ ತಂಬಾಕು, ಬಿಡಿ, ಸಿಗರೇಟ್ ಗೆ ಮೊರೆ ಹೋದ. ರಹಿಮ್ ನ ಸ್ನೇಹಿತ ರಾಮನಿಗೆ ಸಮಯವೇ ಸಿಗುತ್ತಿರಲಿಲ್ಲ. ರಾಮ ಗ್ಯಾರೇಜ್ ಕೆಲಸ ಬಿಟ್ಟು ಬೀದಿ ಬದಿಯಲ್ಲಿ ಸಣ್ಣ ಹೋಟೆಲ್ ಹಾಕಿದ, ಮುಂಜಾನೆ ಎಲ್ಲಾ ಕಡೆ ಪೇಪರ್, ಹಾಲು ಬ್ರೆಡ್ ಕೊಟ್ಟು ಬಂದು ಹೋಟೆಲ್ ನಡೆಸತೊಡಗಿದ. ಸ್ವಲ್ಪ ತೊಂದರೆ ಆಗಲು ಶುರು ಆಯಿತು ಒಬ್ಬ ಹುಡುಗನನ್ನು ಕೆಲಸಕ್ಕೆ ತಗೆದುಕೊಂಡ. ರಾಮ ಸ್ವಲ್ಪ ಪ್ರಿ ಆದ.
ಮತ್ತೆ ಸ್ವಲ್ಪ ಸಮಯದ ಬಳಿಕ ವಾಹನ ಖರೀದಿ ಮತ್ತು ಮಾರಾಟ ಮಾಡಲು ಶುರು ಮಾಡಿದ. ದುಡ್ಡು ಜಾಸ್ತಿ ಬರಲು ಶುರು ಆಯಿತು. ಅಲ್ಲಿ ಕೂಡಾ ಕೆಲಸದಾಳುಗಳನ್ನು ನೇಮಿಸಿಕೊಂಡ. ಮತ್ತೆ ರಾಮನ ಮನಸ್ಸು ಬಟ್ಟೆ ಅಂಗಡಿ ಕಡೆಗೆ ವಾಲಿತು, ಬಟ್ಟೆ ವ್ಯಾಪಾರದಲ್ಲಿ ಕಾಲಿಟ್ಟ ಅಂಗಡಿ ಬಾಡಿಗೆಗೆ ಪಡೆದು ಬಟ್ಟೆ ವ್ಯಾಪಾರ ಸುರು ಮಾಡಿದ. ಹೀಗೆ ರಾಮ ಮುಂದು ವರೆಯತೊಡಗಿದ ರಹಿಮ್ ತಿಂಗಳಿಗೆ 6 ರ ಬದಲು 16 ಸಾವಿರ ವೇತನ ಪಡೆಯ ತೊಡಗಿದ್ದ, ಆದರೆ ರಾಮ ಲಕ್ಷ ಲಕ್ಷ ಸಂಪಾದಿಸಿದ.
ರಹಿಮ್ ಕಂಡ-ಹೆಂಡದ ಮೊರೆ ಹೋಗಿದ್ದ, ಎರಡು ಹೆಂಡತಿ ಎಂಟು ಮಕ್ಕಳನ್ನು ಮಾಡಿದ್ದ, ಮನೆಯ ನಿಬಾಯಿಸಲಾಗದೆ ಕೆಲವೊಮ್ಮೆ ಆತ್ಮಹತ್ಯೆಗೆ ಪ್ರಯತ್ನವೂ ಮಾಡಿದ್ದ, ಪುಟ್ಟ ಪುಟ್ಟ ಮಕ್ಕಳನ್ನು ಶಾಲೆಗೆ ಕಲಿಸುವ ಬದಲು ಕೆಲಸಕ್ಕೆ ತಳ್ಳಿದ್ದ.
ಒಬ್ಬಳು ಸುಂದರ ಸಂಸ್ಕಾರಿ ಹೆಂಡತಿ ಎರಡು ಮುದ್ದು ಮಕ್ಕಳು, ತಿರುಗಾಡಲು ಬೈಕ್ ಕಾರ್ ಸುಖಮಯ ಜೀವನ.
ಒಂದಿನ ರಾಮ ತನ್ನ ಮನೆಯ ಉದ್ಘಾಟನೆಗೆ ಸ್ನೇಹಿತನನ್ನು ಮತ್ತು ಆತನ ಕುಟುಂಬವನ್ನು ಆಹ್ವಾನಿಸಿದ. ರಾಮನ ಮನೆ ಮತ್ತು ಆಸ್ತಿ ಗಳಿಕೆ ನೋಡಿ ರಹಿಮನ ಮನದಲ್ಲಿ ಮೂಡಿತು ನನ್ನ ಗೆಳೆಯ ಹೇಗೆ ಶ್ರೀಮಂತನಾದ ನಾನೇಕೆ ಬಡವನಾದೆ? ಅಷ್ಟರಲ್ಲಿ ರಹಿಮನ ಹೆಂಡತಿ ಕೇಳಿದಳು ಅವರೇಕೆ ಶ್ರೀಮಂತರು ನಾವೇಕೆ ಬಡವರು?
ನೀವು ನಿರ್ಧಾರ ಮಾಡಿ, ರಾಮ ಆಗ್ತೀರಾ? ಅಥವಾ ರಹಿಮ್ ಆಗೋಕೆ ಬಯಸ್ತಿರಾ?
ಕಾಮೆಂಟ್‌ಗಳು