Vaccine registration fraud calls?
ವಿಜಯಪುರ: - ಕರೋನಾ ರೋಗದಿಂದ ಯಾರೆಲ್ಲ ಹೆದರಿಲ್ಲ ಹೇಳಿ, ನೀವು ಹೆದರಿದ್ದೀರಿ ನಾನು ಹೆದರಿದ್ದೇನೆ. ಯಾಕೆಂದರೆ ನಾನು ನನ್ನ ಉತ್ತಮ ಸಂಬಂದಿಕರನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇನೆ. ನನ್ನಂತೆ ಸುಮಾರು ಜನರು ತಮ್ಮ ತಮ್ಮ ಪ್ರೀತಿಯ ಪಾತ್ರರನ್ನು ಕಳೆದುಕೊಂಡಿದ್ದಾರೆ. ಈ ಕರೋನಾ ಎಂಬ ಮರಣ ಮೃದಂಗಕ್ಕೆ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ.
ಈ ಕರೋನಾ ಸೃಷ್ಟಿಸಿದ ಭಯದ ಹೆಸರಿನಲ್ಲಿ ಅನೇಕ ಆನ್ಲೈನ್ ವಂಚನೆ ಪ್ರಕರಣಗಳು ನಡೆಯುತ್ತಿವೆ. ಈಗ ಹೆಸರಿನಲ್ಲಿ ಆನ್ಲೈನ್ ವಂಚನೆ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಜಾರ್ಖಂಡ್ ಮೂಲಕ ಗುಂಪೊಂದು ಈ ವಂಚನೆ ನಡೆಸುತ್ತಿದ್ದಾರೆ.
ಜನರಿಗೆ ಸರ್ಕಾರದ ಯೋಜನೆ ಮತ್ತು ವ್ಯದ್ಯರ ಸೋಗಿನಲ್ಲಿ ಕರೆಮಾಡಿ, ನೀವು ವ್ಯಾಕ್ಸಿನ್ ಪಡೆದಿದ್ದೀರಾ? ವ್ಯಾಕ್ಸಿನ್ ಗಾಗಿ ರೇಜಿಸ್ಟ್ರೇಷನ್ ಮಾಡಿದ್ದೀರಾ? ವ್ಯಾಕ್ಸಿನ್ ಆಸ್ಪತ್ರೆಗೆ ಬಂದು ಹಾಕಿಸಿಕೊಳ್ಳುತ್ತೀರಾ? ವ್ಯಾಕ್ಸಿನ್ ಹಾಕುವ ವ್ಯದ್ಯರನ್ನು ಉಚಿತವಾಗಿ ನಿಮ್ಮ ಮನೆ ಅಡ್ರೆಸಗೆ ಕರೆಯಲಿಚ್ಛಿಸುವಿರಾ? ಹೀಗೆ ನಿಮಗೆ ಅನುಕೂಲವಾಗುವಂತೆ ಪ್ರಶ್ನೆಗಳ ಸುರಿಮಳೆ ಮಾಡುತ್ತಾರೆ.
ಸಾಮಾನ್ಯವಾಗಿ ಯಾರು ಕೂಡಾ ಆಸ್ಪತ್ರೆಗೆ ಹೋಗುವ ತೊಂದರೆ ತೆಗೆದುಕೊಳ್ಳುವದಿಲ್ಲ, ಹೀಗಾಗಿ ಉಚಿತವಾಗಿ ಮನೆಗೆ ಬಂದು ವ್ಯಾಕ್ಸಿನ್ ಹಾಕುವವರನ್ನು ಕರೆಯದೆ ಬಿಡುತ್ತಾರೆಯೇ? ಮನೆಗೆ ಬಂದು ಹಾಕಲು ಹೇಳುತ್ತಾರೆ. ಆ ವ್ಯಾಕ್ಸಿನ್ ಹೆಸರಿನ ವಂಚಕರ ತಂಡ ಇದೆ ಹೇಳಿಕೆಗೆ ಕಾಯುತ್ತಿರುತ್ತಾರೆ.
ಶ್ರೀರಾಮನನ್ನು ಕಂಡು ಹೆದರಿ ಹೌಹಾರಿದ್ದ ಜನರು
ನಾವು ನಿಮ್ಮ ಮನೆಗೆ ಬಂದು ವ್ಯಾಕ್ಸಿನ್ ಹಾಕಲು ನಿಮ್ಮ ಮನೆಯ ಅಡ್ರೆಸ್ ಕೊಡಿ ಅದು ಕೂಡಾ ಆಧಾರ್ ಕಾರ್ಡ್ ನಲ್ಲಿ ಇರುವಂತೆ, ನಂತರ ಆಧಾರ್ ಸಂಖ್ಯೆ ನಮೂದಿಸಿ ಆಧಾರಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸುತ್ತಾರೆ. ನೀವು ಓಟಿಪಿ ಹೇಳುತ್ತಿದ್ದ ಹಾಗೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಮಾಡಿ ಬಿಡುತ್ತಾರೆ. ಒಂದು ವೇಳೆ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದ ಪಕ್ಷದಲ್ಲಿ ನಿಮ್ಮ ಹೆಸರಿನಲ್ಲಿ ಇನ್ಸ್ಟಂಟ್ ಲೋನ್ ಪಡೆದು ಬಿಡುತ್ತಾರೆ. ನಿಮ್ಮ ಹೆಸರಿನಲ್ಲಿ ಸಾಲ ಮಾಡಿ ಅವರು ದುಡ್ಡನ್ನು ಯಾಮಾರಿಸ್ತಾರೆ.
ಸೂಚನೆ:- ಆನ್ಲೈನ್ ಮೂಲಕ ವ್ಯವಹರಿಸುವಾಗ ಎಚ್ಚರಿಕೆ ವಹಿಸಬೇಕು. ಯಾರಿಗೂ ಕೂಡಾ ಗುಪ್ತ ಮಾಹಿತಿಯನ್ನು ನೀಡಬಾರದು. OTP/CVV ಕಾರ್ಡ್ ನಂಬರ್ ಆಧಾರ್ ಸಂಖ್ಯೆ/OTP ಬ್ಯಾಂಕ್ ಖಾತೆ ಪಾಸಬುಕ್. ನಿಮಗೆ ಗೊತ್ತಿರದ ವ್ಯಕ್ತಿಗಳನ್ನು ನಂಬಿ ಮೊಸಹೋಗದಿರಿ. ನಿಮಗೆ ಗೊತ್ತಿರುವಲ್ಲಿ ಮಾತ್ರ ವ್ಯವಹರಿಸಿ. ನಿಮಗೆ ಉಚಿತವಾಗಿ ಸಹಾಯ ಮಾಡಲೆಂದು ಯಾರು ಕೂಡಾ ಬರುವದಿಲ್ಲ, ನಿಮಗೆ ಮೋಸ ಮಾಡಲೆಂದು ಜಗತ್ತು ತುದಿಗಾಲಿನಲ್ಲಿ ನಿಂತಿದೆ. ಎಚ್ಚರ ಎಚ್ಚರ
Tv2kannada
Mahitivedike
ಕ್ಲಿಕ್ ಮಾಡಿ:- ಟಿವಿ2 ಕನ್ನಡ ಯೌಟ್ಯೂಬ್ ಚಾನೆಲಗೆ ಸಬ್ಸ್ ಕ್ರೈಬ್ ಆಗುವಿರೆಂದು ನಂಬಿದ್ದೇನೆ
ಕಾಮೆಂಟ್‌ಗಳು