ಭಾರತೀಯ ರೈಲ್ವೆಯಲ್ಲಿ ಭಾರತೀಯ ರೈಲ್ವೆ ನೇಮಕಾತಿ 2021ರಲ್ಲಿ ಉತ್ತರ ರೈಲ್ವೇ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್, rrcnr.org ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಭಾರತೀಯ ರೈಲ್ವೆ ನೇಮಕಾತಿ 2021 ಅಡಿಯಲ್ಲಿ ಈ ಹುದ್ದೆಗಳಿಗೆ ಸಪ್ಟೆಂಬರ್ 20 ರಿಂದ ಅರ್ಜಿ ಪ್ರಕ್ರಿಯ ಆರಂಭವಾಗಿದೆ. ಅಕ್ಟೋಬರ್ 20, 2021 ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಆಗಿದೆ.


ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ http://www.rrcnr.org/Default.aspx ಭಾರತೀಯ ರೈಲ್ವೆ ನೇಮಕಾತಿ 2021 (Indian Railway Recruitment 2021) ಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 

ಹಾಗೆಯೇ, ನೀವು ಅಧಿಕೃತ ಅಧಿಸೂಚನೆಯನ್ನು http://www.rrcnr.org/rrcnr_pdf/Apprentice2021/Act ಈ ಲಿಂಕ್ ಮೂಲಕ ನೋಡಬಹುದು. ಭಾರತೀಯ ರೈಲ್ವೆ ನೇಮಕಾತಿ 2021 ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 3093 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹೈವೇ ಟೋಲ್ ನಲ್ಲಿ ಹೀಗೆ ಯಾಮಾರಿಸ್ತಾರೆ ಎಚ್ಚರ!


ಭಾರತೀಯ ರೈಲ್ವೇ ನೇಮಕಾತಿ 2021 ರ ಪ್ರಮುಖ ದಿನಾಂಕಗಳು : ಅರ್ಜಿ ಸಲ್ಲಿಸಲು ಆರಂಭ ದಿನಾಂಕ - 20 ಸೆಪ್ಟೆಂಬರ್ 

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 20 ಅಕ್ಟೋಬರ್

ಒಟ್ಟು ಹುದ್ದೆಗಳ ಸಂಖ್ಯೆ - 3093 ಹುದ್ದೆಗಳು


ಭಾರತೀಯ ರೈಲ್ವೇ ನೇಮಕಾತಿ 2021 ಕ್ಕೆ ಅರ್ಹತಾ ಮಾನದಂಡ :

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿರಬೇಕು.

2021 ಭಾರತೀಯ ರೈಲ್ವೆ ನೇಮಕಾತಿಗೆ ವಯಸ್ಸಿನ ಮಿತಿ:
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ 15 ವರ್ಷಕ್ಕಿಂತ ಹೆಚ್ಚಿರಬೇಕು ಮತ್ತು 24 ವರ್ಷಕ್ಕಿಂತ ಕಡಿಮೆ ಇರಬೇಕು.   

ಲಂಬಾಣಿ ಜನರಿಗೆ ಇನ್ಮುಂದೆ ಎಸ್ ಸಿ ಮೀಸಲಾತಿ ಸಿಗುವುದಿಲ್ಲ



ಕಾಮೆಂಟ್‌ಗಳು